ಮಲೆನಾಡು ರಕ್ಷಣಾ ಸೇನೆ ಕರ್ನಾಟಕ
ಸಾಗರ್ ಜಾನೆಕೆರೆ
ರಾಜ್ಯಾದ್ಯಾಕ್ಷರು, ಮಲೆನಾಡು ರಕ್ಷಣಾ ಸೇನೆ ಕರ್ನಾಟಕ
ಇವರ ಬಗ್ಗೆಎರಡು ಸಾವಿರ ವರ್ಷಗಳಿಗಿಂತ ಹೆಚ್ಚು ಇತಿಹಾಸ ಹೊಂದಿರುವ ಕನ್ನಡ ಭಾಷೆ ಕೋಟ್ಯಂತರ ಜನರಿಗೆ ಬದುಕಿನ ಎಲ್ಲಾ ರಂಗಗಳಲ್ಲಿ ಅಭಿವ್ಯಕ್ತಿ ಮಾಧ್ಯಮವಾಗಿರುವ ನಮ್ಮ ಕನ್ನಡ ಭಾಷೆಯು ಈಗಿರುವ ಕರ್ನಾಟಕದ ವ್ಯಾಪ್ತಿಗೆ ಮೀರಿ ಹರಡಿದ್ದ ಕಾಲವೊಂದಿತ್ತು. ಪ್ರಾಚೀನ ಗ್ರಂಥ “ಕವಿರಾಜಮಾರ್ಗ” ದಲ್ಲಿನ ಕನ್ನಡ ನಾಡಿನ ವರ್ಣನೆ ಕಾವೇರಿಯಿಂದ ಗೋದಾವರಿಯವರಗಿನ ನಾಡೆಂಬ ಕಿರ್ತಿಗೆ ಒಳಾಗಾಗಿದ್ದ ನಾಡು. ಕಾಲಕ್ರಮೇಣ ಅದರ ತೀವ್ರತೆ ಕಡಿಮೆಯಾಗುತ್ತಾ ಹೋಯಿತು. ಹೆಸರಾಯಿತು ಕರ್ನಾಟಕ ಆದರೆ ಕನ್ನಡ ಉಸಿರಾಗಲಿಲ್ಲ. ಭಾಷಾವಾರು ಪ್ರಾಂಥ್ಯಗಳು ರಚನೆಯಾಗಿ ಹರಿದು ಹಂಚಿ ಹೋಗಿದ್ದ ಕರ್ನಾಟಕ, ಒಂದಾಗಿ ಏಕೀಕರಣವಾದ ಮೇಲೆ ಕನ್ನಡಿಗನ ಬದಕು ಹಸನಾಗುತ್ತದೆ ಎಂಬ ನಂಬಿಕೆ ಹುಸಿಯಾಗುತ್ತಾ ಹೋಯಿತು. ಆಡಳಿತದಲ್ಲಿ ಕನ್ನಡ ಭಾಷೆ ಅನುಷ್ಠಾನ, ಗಡಿ ಸಮಸ್ಯೆ, ನದಿನೀರಿನ ಹಂಚಿಕೆ, ಉದ್ಯೋಗದ ಸಮಸ್ಯೆ, ಕೇಂದ್ರ ಸರ್ಕಾರದ ತಾರತಮ್ಯ ನೀತಿ ಮತ್ತು ರಾಜ್ಯ ಸರ್ಕಾರದ ಇಚ್ಚಾ ಶಕ್ತಿ ಕೊರತೆಯಿಂದ ಕನ್ನಡಿಗರ ಹಾಗೂ ಕರ್ನಾಟಕದ ಪರಿಸ್ಥಿತಿಗಳು ಪದೇ ಪದೇ ಆತಂಕಕ್ಕೆ ಒಳಗಾಗುತ್ತಲೆ ಬಂತು. ಇದು ಅತ್ಯಂತ ದುರದೃಷ್ಠಕರ ಸಂಗತಿ. ಇದು ಕೇವಲ ಕನ್ನಡಿಗರ ಹುಚ್ಚು ವ್ಯಾಮೋಹದ ಮಾತಲ್ಲ, ಇದು ನೈಜ ಪರಿಸ್ಥತಿ. ಈ ನೆಲದ ತಾಯಿ ಭಾಷೆ ಕನ್ನಡಕ್ಕೆ ಗೌರವವಿಲ್ಲದಿರುವುದು, ಉದ್ಯೋಗ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಆವಾಕಾಶಗಳು ದೊರೆಯದಂತೆ ಹೂಡುವ ಕುತಂತ್ರಗಳು, ಕರ್ನಾಟಕಕ್ಕೆ ನ್ಯಾಯವಾಗಿ ದೊರಕಬೇಕಾದ ಸೌಲಭ್ಯಗಳ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತವಾದ ಗಮನವನ್ನು ನೀಡದಿರುವುದು ಕನ್ನಡಿಗರ ಮನಸ್ಸಿಗೆ ನೋವುಂಟುಮಾಡಿತು. ಇಲ್ಲಿನ ಆರೋಗ್ಯಪೂರ್ಣ ವಾತಾವರಣ ಜನರ ಮಿದುತನ ಇವುಗಳ ಕಾರಣದಿಂದ ಇತರ ಭಾಷೆಯ ಜನ ಇಲ್ಲಿ ಬಂದು ತಮ್ಮ ದಾಷ್ಟತನದಿಂದ ಇಲ್ಲಿನವರ ಮೇಲೆಯೆ ಸವಾರಿ ಮಾಡ ತೊಡಗಿದರು. ಕನ್ನಡನೆಲದಲ್ಲಿ ವಾಸಿಸುವಂತಹ ಪರಭಾಷಿಕರು ನಮ್ಮ ನೆಲದ ಭಾಷೆ ಮತ್ತು ಸಂಸ್ಕೃತಿಗೆ ಧಕ್ಕೆ ತರುವಂತಹ ನಡುವಳಿಕೆಗಳು ಕನ್ನಡಿಗರನ್ನು ಘಾಸಿಗೊಳಿಸಿತು. ನಮ್ಮನಾಳುವ ಪಕ್ಷಗಳ ತಟಸ್ಥ ನೀತಿಯಿಂದ ಬೇಸತ್ತು ಕನ್ನಡಪರ ಚಿಂತಕರ ಚಿಂತನೆ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯ ಉದಯಕ್ಕೆ ಕಾರಣವಾಯಿತು. ಕರ್ನಾಟಕ ರಕ್ಷಣಾ ವೇದಿಕೆ ಮೊದಲ ಯಶಸ್ಸಿನ ಹೋರಾಟ ಆರಂಭ ೧೯೯೯ ರಲ್ಲಿ. ಬೆಂಗಳೂರಿನ (ಎಜಿಎಸ್) ಕೇಂದ್ರೀಯ ಲೆಕ್ಕ ಪರಿಶೋಧಕ ಕಛೇರಿಯಲ್ಲಿ ಪ್ರಾರಂಭವಾಯಿತು. ಅಲ್ಲಿ ಖಾಲಿಯಿದ್ದ ೨೩ ಹುದ್ದೆಗಳ ನೇಮಕಾತಿಗೆ ಪರ ರಾಜ್ಯದವರನ್ನು ಆಯ್ಕೆ ಮಾಡುವ ಹುನ್ನಾರ ನಡೆಸಿದ್ದರು. ಇಲ್ಲಿಯೇ ಇದ್ದಂತಹ ಅಭ್ಯರ್ಥಿಗಳು ಅರ್ಹರಿದ್ದರು ಅವರನ್ನು ಕಡೆ ಗಣಿಸಿದ್ದನ್ನು ಗಮನಿಸಿ, ನೇಮಕಾತಿ ವಿರುದ್ಧ ಉಗ್ರ ಹೋರಾಟವನ್ನು ಮಾಡಿ ಯಶಸ್ಸುಗಳಿಸಿದ ನಂತರ ಸಂಘಟನೆಯ ಮಹತ್ವವನ್ನು ಮನಗಂಡು ಹಲವಾರು ಬುದ್ದಿಜೀವಿಗಳ ಸಲಹೆಯ ಮೇರೆಗೆ ನಾಡಿನಾದ್ಯಂತ ಸಂಘಟನೆಯ ಶಾಖೆಗಳನ್ನು ಆರಂಭಿಸಲಾಯಿತು. ಸಂಘಟನೆ ಬೆಳೆಯುತ್ತಿದ್ದಂತೆ ಹಲವು ನಾಯಕರುಗಳು ವ್ಯಕ್ತಿ ಪೂಜೆಗೆ ಅಣಿಯಾಗುತ್ತಿದ್ದನ್ನು ಗಮನಿಸಿದ ಪ್ರವೀಣ್‌ಕುಮಾರ್ ಶೆಟ್ಟಿ ರವರು ಪ್ರಶ್ನಿಸಲು ಆರಂಭಿಸಿದರು. ಇದು ಹಲವು ನಾಯಕರುಗಳಿಗೆ ಇರಿಸು ಮುರಿಸಾಗಿ ಅವರದೇ ಆದ ದಾರಿಯನ್ನು ಹಿಡಿದರು. ಆದರೆ ಚಲ ಬಿಡದ ಪ್ರವೀಣ್‌ಕುಮಾರ್ ಶೆಟ್ಟಿ ರವರು ಇಡೀ ರಾಜ್ಯಾದ್ಯಂತ ಸಂಘಟನೆಯನ್ನು ಹುಟ್ಟು ಹಾಕಿದರು. ತಮ್ಮ ಮೇಲೆ ಇದ್ದಂತಹ ನೂರಾರು ಮೊಕದ್ದಮೆಗಳನ್ನು ಎದುರಿಸಿ ಸೆರೆವಾಸ, ಲಾಟಿ ಏಟು ಮುಂತಾದ ಆನೇಕ ಸಂಕಷ್ಟಗಳನ್ನು ಎದುರಿಸಿ ಸತತ ೧೬ ವರ್ಷಗಳ ಪರಿಶ್ರಮದ ಫಲವಾಗಿ ಇಂದು ಕನ್ನಡಿಗರಿಗೆ ಸಾವಿರಾರು ಹೋರಾಟಗಳಲ್ಲಿ ನ್ಯಾಯವನ್ನು ದೊರಕಿಸಿಕೊಟ್ಟವರು. ಕನ್ನಡಿಗರಿಂದ ಕನ್ನಡಿಗರಿಗಾಗಿ ಕರ್ನಾಟಕ ರಕ್ಷಣಾ ವೇದಿಕೆಯು ಬೃಹದಾಕಾರವಾದ ಸಂಘಟನೆಯಾಗಿ ಬೆಳೆಯಲು ಕನ್ನಡಿಗರ ಪರಿಶ್ರಮ ಅಪಾರವಾದದ್ದು. ರಾಜ್ಯಾಧ್ಯಕ್ಷರಾದ ಶ್ರೀಯುತ ಪ್ರವೀಣ್‌ಕುಮಾರ್ ಶೆಟ್ಟಿ ರವರ ನೇರ ನುಡಿ, ಸರಳ ಸಜ್ಜನಿಕೆ, ರಾಜ್ಯಮಟ್ಟದ ಪದಾಧಿಕಾರಿಗಳಿಂದ ಸಾಮನ್ಯ ಕಾರ್ಯಕರ್ತನಿಗು ಅವರು ಸಮಾನ ರೀತಿಯಿಂದ ನೋಡುವ ವಿಶಾಲ ಮನೋಭಾವನೆ ಸಂಘಟನೆಯ ಯಶಸ್ಸಿಗೆ ಕಾರಣವಾಯಿತು. ಜಾತಿ, ಮತ, ಬಡವ-ಶ್ರೀಮಂತ ಎಂಬ ಬೇದವಿಲ್ಲದೆ, ಸಂಘಟನೆಯ ಸಿದ್ಧಾಂತಗಳನುಗುಣವಾಗಿ ಪದಾಧಿಕಾರಿಗಳ ಆಯ್ಕೆ ಸಂಘಟನೆಯನ್ನು ಇನ್ನಷ್ಟು ಬಲಗೊಳಿಸಿತು.
ನಮ್ಮ ಸಂಘಟನೆಗಳಲ್ಲಿ ಪಾಲ್ಗೊಳ್ಳಿ